ಜ್ಞಾನವಿಕೃತಭಾವವುಳ್ಳರೆ ಪ್ರಕಾಶತ್ವ ಶೂನ್ಯವಾಗಿಹುದು;
ಅಲ್ಲಿ ಸ್ವಯಜಂಗಮವೆನಲಿಲ್ಲ.
ವರ್ತನವಿಕೃತಭಾವವುಳ್ಳರೆ ಪ್ರಮೋದತ್ವ ಪ್ರವರ್ತನತ್ವ ನಾಸ್ತಿಯಾಗಿಹುದು;
ಅಲ್ಲಿ ಚರಜಂಗಮವೆನಲಿಲ್ಲ.
ಮೋಹನವಿಕೃತಭಾವವುಳ್ಳರೆ ಪ್ರಮೋದತ್ವ ವಿರಹಿತವಾಗಿಹುದು;
ಅಲ್ಲಿ ಪರಜಂಗಮವೆನಲಿಲ್ಲ.
ಇದು ಕಾರಣ ತ್ರಿವಿಧವಿರ್ದು ತ್ರಿವಿಧನಾಸ್ತಿಯಾದಲ್ಲಿ
ತ್ರಿವಿಧನುಗ್ರಹ ಮಾಡಿದರೆ ತ್ರಿವಿಧ ದ್ರೋಹತಪ್ಪದು,
ಗುರುನಿರಂಜನ ಚನ್ನಬಸವಲಿಂಗಕ್ಕೆ ನೀಡಬೇಕಾದರೆ
ಅರಸಿ ಕಂಡು ಮಾಡಬೇಕು, ಸ್ಥಲಕ್ಕೆ ಸನುಮತ.