Index   ವಚನ - 1033    Search  
 
ಕೊಳ್ಳುವಲ್ಲಿ ಒಂದು ಭಾವ, ಹಿಡಿದು ಬಂದಲ್ಲಿ ಒಂದು ಭಾವ, ನಡೆವಲ್ಲಿ ಒಂದು ಭಾವ, ಹೂಸರೊಳ್ಳೆಯ ತೆರನಿಪ್ಪ ಬಗೆಯನರಿಯದೆ ಆಸೆವಿಡಿದಾಡಿದರೆ ದ್ವಂದ್ವಪಾಶ ಹಿಂಗದು. ಅದೆಂತೆಂದೊಡೆ, ಕಾಣದೆ ಕಂಡು ಮಾಡುವುದು ಗುರುನಿರಂಜನ ಚನ್ನಬಸವಲಿಂಗದಲ್ಲಿ ಕಾಯಗಾಣದ ಗುರುವಾಗಬೇಕಾದಡೆ.