Index   ವಚನ - 1054    Search  
 
ಹುಟ್ಟಿದ ಮನೆಯ ನೆಟ್ಟನೆ ಹಿಡಿದೆಯ್ದಬಲ್ಲರೆ ಶರಣ. ಬಾಳಿ ಬದುಕುವ ಸ್ಥಲವ ಬಿಟ್ಟಳಿಸಿರದಿರಬಲ್ಲರೆ ಶರಣ. ಹೊಂದಿಹೋಗುವ ಬಯಲವಾಸವ ಸಂದಿಸಿ ಸ್ವಯಮಾಡಿಕೊಳಬಲ್ಲರೆ ಶರಣ. ಹುಟ್ಟಿದ ಮನೆಯ ಬಳಸದೆ ನಡೆವ ನಡೆಯ ತುಳಿಯದೆ ಅಳಿವ ಅಳುಕಿಂಗಾಗದಿರ್ದಡಾತ ಸತ್ಯಶರಣ ಸಹಜ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.