ಅಗಮ್ಯ ಗತಿಭಾವಿ, ಅನುಪಮ ಮತಿಯುಕ್ತ,
ತನುಪ್ರಾಣಸಂಬಂಧಿ ತಾನಾದ ಶರಣಂಗೆ,
ತನುವಿನ ತರಹರವ ತರಲಿಲ್ಲ,
ಮನದ ಮಗ್ನತೆಯನರಿಯಲಿಲ್ಲ,
ಪ್ರಾಣದ ಹೊಲೆಯ ಕಾಣಲಿಲ್ಲ.
ಭಾವ ನಿರ್ಭಾವ ನಿರಾವಲಂಬಿ
ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬಲ್ಲಿ.
Art
Manuscript
Music
Courtesy:
Transliteration
Agamya gatibhāvi, anupama matiyukta,
tanuprāṇasambandhi tānāda śaraṇaṅge,
tanuvina taraharava taralilla,
manada magnateyanariyalilla,
prāṇada holeya kāṇalilla.
Bhāva nirbhāva nirāvalambi
guruniran̄jana cannabasavaliṅgakkaṅgavemballi.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು