Index   ವಚನ - 1058    Search  
 
ಒಳಗಣ ಗಂಟಬಿಚ್ಚಿತಂದ ಹೊರಗಣ ವ್ಯವಹಾರಿಗಳನೇಕರುಂಟು. ಹೊರಗಣ ಗಂಟಬಿಚ್ಚಿ ಒಳಗೊಯ್ದು ವ್ಯವಹಾರಗೊಂಬ ಜಾಣರಾರು ಹೇಳಾ? ಇದು ಕಾರಣ, ನಿಮ್ಮ ಶರಣ ಒಳಹೊರಗರಿಯದೆ ವ್ಯವಹಾರದಲ್ಲಿ ಪರವಶನಾಗಿ ಮರೆದಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ.