Index   ವಚನ - 1059    Search  
 
ಲೋಕಸಾಕ್ಷಿಯಾಗಿ ಮದುವೆಯಾದ ಸತಿಯು ಲೋಕವರಿಯದಂತೆ ಪುರುಷನ ನೆರೆವಳಲ್ಲದೆ ಕಾಣಿಸಿಕೊಂಡರೆ ಮನಭಂಗ ನೋಡಾ. ಆರಾರರಿಯದಂತೆ ಅನುಗ್ರಹ ಪಡೆದುಕೊಂಡು ಬಂದು ಆರಾರರಿಯದಂತೆ ಅರ್ಚನೆ ಭೋಗವ ಸಲ್ಲಿಸಿಕೊಳ್ಳಬೇಕಲ್ಲದೆ ಇತರರ್ಗಿತರ ಪೂಜಾಭೋಗವ ಕಾಣಿಸಿಕೊಂಡರೆ ಅದು ಭಂಗವಲ್ಲವೆ ನೋಡಾ! ಆ ಭಂಗವ ಹಿಂಗಿ ಬಯಲಗೊಂಡಾತನಲ್ಲದೆ ಶರಣನಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.