ಲೋಕಸಾಕ್ಷಿಯಾಗಿ ಮದುವೆಯಾದ ಸತಿಯು
ಲೋಕವರಿಯದಂತೆ ಪುರುಷನ ನೆರೆವಳಲ್ಲದೆ
ಕಾಣಿಸಿಕೊಂಡರೆ ಮನಭಂಗ ನೋಡಾ.
ಆರಾರರಿಯದಂತೆ ಅನುಗ್ರಹ ಪಡೆದುಕೊಂಡು ಬಂದು
ಆರಾರರಿಯದಂತೆ ಅರ್ಚನೆ ಭೋಗವ ಸಲ್ಲಿಸಿಕೊಳ್ಳಬೇಕಲ್ಲದೆ
ಇತರರ್ಗಿತರ ಪೂಜಾಭೋಗವ ಕಾಣಿಸಿಕೊಂಡರೆ
ಅದು ಭಂಗವಲ್ಲವೆ ನೋಡಾ!
ಆ ಭಂಗವ ಹಿಂಗಿ ಬಯಲಗೊಂಡಾತನಲ್ಲದೆ ಶರಣನಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Lōkasākṣiyāgi maduveyāda satiyu
lōkavariyadante puruṣana nerevaḷallade
kāṇisikoṇḍare manabhaṅga nōḍā.
Ārārariyadante anugraha paḍedukoṇḍu bandu
ārārariyadante arcane bhōgava sallisikoḷḷabēkallade
itarargitara pūjābhōgava kāṇisikoṇḍare
adu bhaṅgavallave nōḍā!
Ā bhaṅgava hiṅgi bayalagoṇḍātanallade śaraṇanalla kāṇā
guruniran̄jana cannabasavaliṅgā.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು