Index   ವಚನ - 1060    Search  
 
ಕಾಣಿಸಿಕೊಳ್ಳದ ಶರಣ ಕಾಣಿಸಿಕೊಂಡಾಚರಿಸುವನೆ? ಕಾಣಬಾರದು ಕರ್ಮಿಗಳು, ತೋರಬಾರದು ಧರ್ಮಿಗಳು, ಇದರಂದವನರಿದಿರ್ದಡಾತ ಸುಜ್ಞಾನಿ ಶರಣ ಗುರುನಿರಂಜನ ಚನ್ನಬಸವಲಿಂಗದಲ್ಲಿ.