Index   ವಚನ - 1069    Search  
 
ಕಾಷ್ಠದಿಂದುದಿಸಿದ ಪಾವಕ ತನ್ನೊಳಗೆ ಕಾಷ್ಠದ ಕುರುಹ ತೋರಿಸಿಕೊಳ್ಳದು ನೋಡಾ. ಜಲದಿಂದೆ ಜನಿಸಿದ ತಾವರೆಯು ತನ್ನ ಮೇಲೆ ಪೂರ್ವವ ಕಾಣಿಸಿಕೊಳ್ಳದು ನೋಡಾ. ಪ್ರಾಣಾಂಗದಿಂದೆ ತೋರಿದ ಲಿಂಗಶರಣನು ಹಿಂದಣ ಪ್ರಾಣಪ್ರಕೃತಿಯ ಒಡಲೊಳಗರಸ, ತನುಪ್ರಕೃತಿಯ ತಲೆಯಲ್ಲಿ ತೋರ, ತೋರಿದರೆ ಸ್ಥಲಕ್ಕೆ ಅಸಂಬಂಧ. ಅರಿವುದು ತ್ರಿವಿಧದಲ್ಲಿ ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾದೆವೆಂಬ ಅರುಹಿರಿಯರು.