Index   ವಚನ - 1068    Search  
 
ಇಕ್ಷುವಿನೊಳಗೆ ಶರ್ಕರವ ಕಾಣಬಹುದಲ್ಲದೆ, ಶರ್ಕರದೊಳಗೆ ಇಕ್ಷುವಿನ ಕಂಡವರುಂಟೆ? ಕ್ಷೀರದೊಳಗೆ ಘೃತವ ಕಾಣಬಹುದಲ್ಲದೆ, ಘೃತದೊಳಗೆ ಕ್ಷೀರವ ಕಂಡವರುಂಟೆ? ಶುಕ್ತಿಯೊಳಗೆ ಮೌಕ್ತಿಕವ ಕಾಣಬಹುದಲ್ಲದೆ, ಮೌಕ್ತಿಕದೊಳಗೆ ಶುಕ್ತಿಯ ಕಂಡವರುಂಟೆ? ಸಂಸಾರದೊಳಗೆ ಶರಣನ ಕಾಣಬಹುದಲ್ಲದೆ, ಶರಣನೊಳಗೆ ಸಂಸಾರವ ಕಂಡವರುಂಟೆ? ಮೂರು ಲೋಕದೊಳಗೆ ಇಲ್ಲ ಇಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗ ಸಂಸಾರ ಶರಣ.