Index   ವಚನ - 1080    Search  
 
ಚಂದ್ರಮೌಳಿಯೆನಿಸಿಕೊಂಡು ಕಾಮನನುರುಹಿದನೆಂದರೆ ನಗೆ ಬಂದಿತ್ತೆನಗೆ. ಮಾಯಾಕೋಲಾಹಲನೆನಿಸಿಕೊಂಡು ಮುಡಿಯಲ್ಲಿ ಹೆಣ್ಣ ತಳೆದನೆಂದರೆ ನಗೆ ಬಂದಿತ್ತೆನಗೆ. ನಿಃಕಲಗುರುನಿರಂಜನ ಚನ್ನಬಸವಲಿಂಗವೆನಿಸಿಕೊಂಡು ಎನಗೆ ಪತಿಯಾಗಿ ಭೋಗಿಸುವುದ ಕಂಡು ನಗೆ ಬಂದಿತ್ತು ಎನ್ನೊಳಗೆ.