ತನುಶೂನ್ಯನಾಗಿ ಆಚಾರಲಿಂಗ ಶೂನ್ಯ,
ಮನಶೂನ್ಯನಾಗಿ ಗುರುಲಿಂಗ ಶೂನ್ಯ,
ಪ್ರಾಣಶೂನ್ಯನಾಗಿ ಶಿವಲಿಂಗ ಶೂನ್ಯ,
ಭಾವಶೂನ್ಯನಾಗಿ ಜಂಗಮಲಿಂಗ ಶೂನ್ಯ,
ಜ್ಞಾನಶೂನ್ಯನಾಗಿ ಪ್ರಸಾದಲಿಂಗ ಶೂನ್ಯ,
ಆತ್ಮಶೂನ್ಯನಾಗಿ ಮಹಾಲಿಂಗಶೂನ್ಯ.
ಸರ್ವಶೂನ್ಯನಾಗಿ ಸತಿಪತಿಭಾವದ ಸಲೀಲೆಗೊಮ್ಮೆ
ಸಾಕಾರ ಸಂಯೋಗಿ ಗುರುನಿರಂಜನ
ಚನ್ನಬಸವಲಿಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Tanuśūn'yanāgi ācāraliṅga śūn'ya,
manaśūn'yanāgi guruliṅga śūn'ya,
prāṇaśūn'yanāgi śivaliṅga śūn'ya,
bhāvaśūn'yanāgi jaṅgamaliṅga śūn'ya,
jñānaśūn'yanāgi prasādaliṅga śūn'ya,
ātmaśūn'yanāgi mahāliṅgaśūn'ya.
Sarvaśūn'yanāgi satipatibhāvada salīlegom'me
sākāra sanyōgi guruniran̄jana
cannabasavaliṅgā nim'ma śaraṇa.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು