Index   ವಚನ - 1092    Search  
 
ಹುಸಿಗಲತ ಕ್ರಿಯೆಯು ಹಸಿಯ ಮಡಕೆಯೊಳುದಕವ ತುಂಬಿದಂತೆ. ಹುಸಿಗಲತ ಜ್ಞಾನವು ಮಲಗಪ್ಪಡವ ತೊಳೆದು ಲೇಸನರಸುವಂತೆ. ಹುಸಿಗಲತ ಸ್ನೇಹವು ಮುಳ್ಳುನಟ್ಟ ನೋವಿನಿಂದ ಗಿರಿಯನಡರುವಂತೆ. ಹುಸಿಗಲತ ಗುರುನಿರಂಜನ ಚನ್ನಬಸವಲಿಂಗವೆನಗೊಶಗತವೆಂದರೆ ಹಸಗೆಟ್ಟ ಹೆಣನ ಮೋಹಿಸುವ ರುಚಿಯಂತೆ ಸಂಬಂಧ.