ಲೋಕ ಲೌಕಿಕವಿಡಿದು ನಿಂದರೇನು?
ಕತ್ತಲ ಬೆಳಗ ಕಾಣುವನಲ್ಲದೆ ಕತ್ತಲೆ ಬೆಳಗಲ್ಲ ನೋಡಾ.
ದೇವತೆಗಳ ಮೂವತ್ತುಮೂರು ಕೋಟಿಯ ಕಾಣುವನಲ್ಲದೆ
ದೇವತೆಗಳು ಮೂವತ್ತುಮೂರುಕೋಟಿಯಲ್ಲ ನೋಡಾ.
ರಾಕ್ಷಸರರುವತ್ತಾರು ಕೋಟಿಯ ಕಾಣುವನಲ್ಲದೆ
ರಾಕ್ಷಸರರುವತ್ತಾರು ಕೋಟಿಯಲ್ಲ ನೋಡಾ.
ಮುನಿಗಳ ಸಂದೋಹವ ಕಾಣುವನಲ್ಲದೆ,
ಮುನಿಗಳ ಸಂದೋಹವಲ್ಲ ನೋಡಾ.
ಗುರುನಿರಂಜನ ಚನ್ನಬಸವಲಿಂಗವನು ತೋರದೆ ಕಾಂಬುವನಲ್ಲದೆ
ತೋರಿಕೊಂಬುವನಲ್ಲ ನೋಡಾ ಶರಣನು.
Art
Manuscript
Music
Courtesy:
Transliteration
Lōka laukikaviḍidu nindarēnu?
Kattala beḷaga kāṇuvanallade kattale beḷagalla nōḍā.
Dēvategaḷa mūvattumūru kōṭiya kāṇuvanallade
dēvategaḷu mūvattumūrukōṭiyalla nōḍā.
Rākṣasararuvattāru kōṭiya kāṇuvanallade
rākṣasararuvattāru kōṭiyalla nōḍā.
Munigaḷa sandōhava kāṇuvanallade,
munigaḷa sandōhavalla nōḍā.
Guruniran̄jana cannabasavaliṅgavanu tōrade kāmbuvanallade
tōrikombuvanalla nōḍā śaraṇanu.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು