Index   ವಚನ - 1099    Search  
 
ಶಿವಯೋಗಿಯ ಯೋಗವನಾರು ಬಲ್ಲರು ಹೇಳಾ. ಖೇಚರಿಯನರಿದು, ಷಣ್ಮುಖಿಯಲ್ಲಿ ಆಚರಿಸಿ, ಶಾಂಭವಿಯೊಳಿರ್ಪ ನಿರ್ಮಲಾನಂದ ನಿಜವೀರಶೈವನನಾರು ಬಲ್ಲರು ಹೇಳಾ! ಅಷ್ಟಾಂಗಯೋಗದಲ್ಲಿ ಶ್ರೇಷ್ಠಾಭಿಮಾನಿಗಳಾದ ನಿಜನಿಷ್ಠೆಮಹಿಮರ ಘನವನಾರು ಬಲ್ಲರು ಹೇಳಾ! ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ ಪರಿಯ ನೀವೇ ಬಲ್ಲಿರಿ.