Index   ವಚನ - 1112    Search  
 
ತಿಲ ಏರಂಡಿಲ ಬೀಜವು ಭೂ ಜಲ ಸಂಪರ್ಕದಿಂದೆ ಅಂಕುರಿಸಿ ಬೆಳೆದು ಆಗಿನೊಳು ತೈಲ ಶೂನ್ಯತೋರಲು ಮುಂದೆ ತಪ್ಪದು. ಈ ತೆರನಿಪ್ಪನು ಅನಾದಿ ಶರಣ ಭಾವಜ್ಞರಿಗೆ ಗುರುನಿರಂಜನ ಚನ್ನಬಸವಲಿಂಗ ತಾನೆಂಬ ತೋರಿಕೆ.