Index   ವಚನ - 1130    Search  
 
ಕಾಯದಲ್ಲಿ ಕಳೆಯನರಿಯದ ಕೋಣ, ಪ್ರಾಣದಲ್ಲಿ ಗುಣವನರಿಯದ ಕತ್ತೆ, ಕರ್ಮಖಂಡಣೆಯ ಗೂಗಿ, ಈ ಪ್ರಾಣಿಗಳ ಹೆಜ್ಜೆಯ ಹರಿದುರಿದು ಹರದನಾದನೊಬ್ಬ. ಹರದನ ಕೈಯ ಮಾಣಿಕ ಮೂರುಭಾಗವಾಗಿ ಮುಸುಕಿದರೆ ಹಬ್ಬದ ಸೊಬಗು ಹವಣವಾಗಿ ನಿಂದಿತ್ತು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಂತೆ.