Index   ವಚನ - 1131    Search  
 
ಸನ್ಯಾಸಿಯ ಹಾವುಗೆ ಉರಿವಲ್ಲಿ, ಸಾಲುಮನೆಯ ಜ್ಯೋತಿ ಬಂದಲ್ಲಿ, ಸವತೆಯರಾಟಕ್ಕೆ ಬೇಟವಿಲ್ಲ. ಕೋಟಿ ಕೋಟಿ ಕೋವಿದರೆಲ್ಲ ಹೇಳುವ ಕೇಳುವ ಸಾರಸಂದುವ ಮರೆದು ಮೀರಿ ನಿಂದರು ಗುರುನಿರಂಜನ ಚನ್ನಬಸವಲಿಂಗವಾಗಿ ಶರಣಸಹಿತ.