ಅರ್ಥ ಪ್ರಾಣ ಅಭಿಮಾನ ನಾಸ್ತಿಯಾದಲ್ಲಿ
ಕಿಚ್ಚುಗೊಂಡು ಮುಗ್ಧರಾದರು ಅನಂತರು.
ಪರಧನ ಪರಸ್ತ್ರೀ ಪರಹಿಂಸೆಗೆಳಸಿ
ಬಾಧೆಗೆ ಸಿಲ್ಕಿ ಮುಗ್ಧರಾದರಖಿಳರು.
ಅನಿಷ್ಟವೆರಸಿ ಅಧಿಕರೋಗವೆಡೆಗೊಂಡಲ್ಲಿ ಮುಗ್ಧರು.
ಆಯಾಯ ಕಾಲಕ್ಕೆ ಅಲ್ಲಲ್ಲಿಗೆ ಮುಗ್ಧರಲ್ಲದೆ ನಿತ್ಯಮುಗ್ಧರಲ್ಲ.
ಇದು ಕಾರಣ, ಲಿಂಗಶರಣನಿಂತಲ್ಲ.
ಕಾಯದಲ್ಲಿ ಮುಗ್ಧ, ಕರಣದಲ್ಲಿ ಮುಗ್ಧ,
ಪ್ರಾಣದಲ್ಲಿ ಮುಗ್ಧ, ಭಾವದಲ್ಲಿ ಮುಗ್ಧ,
ಗುರುನಿರಂಜನ ಚನ್ನಬಸವಲಿಂಗ ಸಮರಸವಾಗಿ.
Art
Manuscript
Music
Courtesy:
Transliteration
Artha prāṇa abhimāna nāstiyādalli
kiccugoṇḍu mugdharādaru anantaru.
Paradhana parastrī parahinsegeḷasi
bādhege silki mugdharādarakhiḷaru.
Aniṣṭaverasi adhikarōgaveḍegoṇḍalli mugdharu.
Āyāya kālakke allallige mugdharallade nityamugdharalla.
Idu kāraṇa, liṅgaśaraṇanintalla.
Kāyadalli mugdha, karaṇadalli mugdha,
prāṇadalli mugdha, bhāvadalli mugdha,
guruniran̄jana cannabasavaliṅga samarasavāgi.
ಸ್ಥಲ -
ಐಕ್ಯಸ್ಥಲದ ಉಳಿದ ವಚನಗಳು