Index   ವಚನ - 1162    Search  
 
ಹಾಳೂರೊಳಗೆ ಬಾಳುವೆಮಾಡುವಳೊಬ್ಬಳು ನಾರಿ. ಮೊದಲ ಮಗನ ಕೈಗಳಲ್ಲಿ ಗಂಡನ ಕಣ್ಣು ನೋಡಾ. ಆ ಕಣ್ಣ ಮೇಲೆ ಬಾಯಿತೆರೆದು ಮೂಗಿಲಿ ಕೊಂಬ ಮುಸುಕಲಿಯೊಳಗಿರ್ದು ಕಣ್ಣನೆತ್ತಿ ಕಡೆಗಂಡು ಕರಗಿದೆಯೆಂಬ ನಡುಮಾತಿನತ್ತತ್ತ ಗುರುನಿರಂಜನ ಚನ್ನಬಸವಲಿಂಗಾ.