ಸ್ಥೂಲಾಂಗವೆಂಬ ಷಡ್ವಿಧೇಂದ್ರಿಯಂಗಳಲ್ಲಿ
ಷಡ್ವಿಧಲಿಂಗವಾಗಿರ್ದ ಇಷ್ಟಲಿಂಗಾಯತನಾಗಿ,
ಸೂಕ್ಷ್ಮಾಂಗವೆಂಬ ಷಟ್ಕರಣಂಗಳಲ್ಲಿ
ಷಡ್ವಿಧಲಿಂಗವಾಗಿರ್ದ ಪ್ರಾಣಲಿಂಗಸ್ವಾಯತನಾಗಿ,
ಕಾರಣಾಂಗವೆಂಬ ಷಡ್ವಿಧವಿಷಯಂಗಳಲ್ಲಿ
ಷಡ್ವಿಧಲಿಂಗವಾಗಿರ್ದ ಭಾವಲಿಂಗಸನ್ನಿಹಿತನಾಗಿ.
ಈ ತ್ರಿವಿಧಲಿಂಗವೊಂದಾಗಿರ್ದ ಮಹಾಘನಾನಂದ ಪ್ರಭಾನಿತ್ವ ಶರಣನು,
ತಾನೆ ನಡೆದುದೆಲ್ಲ ಸತ್ಕ್ರಿಯೆ, ಹಿಡಿದುದೆಲ್ಲ ಸದ್ವೃತ,
ನುಡಿದುದೆಲ್ಲ ಪರಮಾನುಭಾವ,
ನೆನೆವುದೆಲ್ಲ ಶಿವಮಂತ್ರ, ಧ್ಯಾನಿಸವುದೆಲ್ಲ ಸ್ವಯಮಾನಂದ ಸುಖವು,
ನೋಡಿ, ಪರಿಣಾಮಿಸುವುದೆಲ್ಲ ನಿಜಲೀಲೆ ಮತ್ತೇನುಯಿಲ್ಲದ ಎತ್ತೆತ್ತರುವಿನತ್ತತ್ತ,
ಗುರುನಿರಂಜನ ಚನ್ನಬಸವಲಿಂಗ
ತಾನೇ ಪರಿಪೂರ್ಣ.
Art
Manuscript
Music
Courtesy:
Transliteration
Sthūlāṅgavemba ṣaḍvidhēndriyaṅgaḷalli
ṣaḍvidhaliṅgavāgirda iṣṭaliṅgāyatanāgi,
sūkṣmāṅgavemba ṣaṭkaraṇaṅgaḷalli
ṣaḍvidhaliṅgavāgirda prāṇaliṅgasvāyatanāgi,
kāraṇāṅgavemba ṣaḍvidhaviṣayaṅgaḷalli
ṣaḍvidhaliṅgavāgirda bhāvaliṅgasannihitanāgi.
Ī trividhaliṅgavondāgirda mahāghanānanda prabhānitva śaraṇanu,
tāne naḍedudella satkriye, hiḍidudella sadvr̥ta, Nuḍidudella paramānubhāva,
nenevudella śivamantra, dhyānisavudella svayamānanda sukhavu,
nōḍi, pariṇāmisuvudella nijalīle mattēnuyillada ettettaruvinattatta,
guruniran̄jana cannabasavaliṅga
tānē paripūrṇa.