Index   ವಚನ - 1174    Search  
 
ಪರಿಪೂರ್ಣಭಾವಿ ಶರಣ ತಾನೊಂದು ವೇಳೆ ಬರಿಯಕಾಲಲ್ಲಿ ನಡೆವನೇ, ಬರಿಯ ಕೈಯಲ್ಲಿ ಹಿಡಿವನೇ, ಬರಿಯ ಮುಖದಲ್ಲಿ ನುಡಿವನೇ, ಬರಿಯ ಕಣ್ಣಿನಿಂದ ನೋಡುವನೇ, ಬರಿಯ ಹೃದಯದಲ್ಲಿ ಸುಖಿಸುವನೇ. ಆ ಭಾವದೊಳಗೆ ಈ ಭಾವ ಸದ್ಭಾವವದು ತಾನೆ ಗುರುನಿರಂಜನ ಚನ್ನಬಸವಲಿಂಗಾ.