Index   ವಚನ - 1179    Search  
 
ನೆಲದಮೇಲೆ ನಡೆವರು, ನೀರ ಮೇಲೆ ನಡೆವರು, ಗಗನದ ಮೇಲೆ ನಡೆವರು, ಗಾಳಿಯ ಮೇಲೆ ನಡೆವರು, ಪಾವಕನ ಮೇಲೆ ನಡೆವರು ಇವರೆಲ್ಲ ಆತ್ಮವಿದ್ಯೆ ಸಾಧಕರು. ಇವರ ವಿದ್ಯಕ್ಕೆ ಸಮ್ಮುಖ ಗುರುನಿರಂಜನ ಚನ್ನಬಸವಲಿಂಗದ ನಿಲುವು ತಾನಾದ ಕುರುಹು ಪಂಚಗಮನ ನಿಷ್ಪತ್ತಿ ನಿರುಪಮಾನಂದ ನಿತ್ಯ ಕಾಣಾ.