ಪಂಚೇಂದ್ರಿಯ ಕರ್ಮವಳಿಯದೆ,
ಕಾಯಕ ಗುಣನಾಲ್ಕರಲ್ಲಿ ಕಟ್ಟುಗೊಂಡು,
ವಾಚಕದ ಗುಣಯುತನಾಗಿ,
ಮಾನಸದ ಗುಣನಾಲ್ಕರ ಬದ್ಧವೆರೆದ
ಅಶುದ್ಧನೊಂದಾಚಾರವ ಹೊತ್ತು ನಟಿಸಿದರೇನು,
ಅವನಿಗದ ತೋರಿ ನಟಿಸುತ್ತಿರ್ದನನುದಿನ
ಭಕ್ತನಂಗ ಸುಲಲಿತ ಸುಖದೊಳು
ನಮ್ಮ ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರದಾಯಕಲಿಂಗವು.
Art
Manuscript
Music
Courtesy:
Transliteration
Pan̄cēndriya karmavaḷiyade,
kāyaka guṇanālkaralli kaṭṭugoṇḍu,
vācakada guṇayutanāgi,
mānasada guṇanālkara bad'dhavereda
aśud'dhanondācārava hottu naṭisidarēnu,
avanigada tōri naṭisuttirdananudina
bhaktanaṅga sulalita sukhadoḷu
nam'ma canna śud'dhasid'dhaprasid'dha pradāyakaliṅgavu.
ಸ್ಥಲ -
ಆಚಾರಾಂಗಸ್ಥಲದ ವಚನಗಳು