Index   ವಚನ - 1184    Search  
 
ಬಹಿರಂಗದಲ್ಲಿ ದುರಾಚಾರ ಅಂತರಂಗದಲ್ಲಿ ದುಃಸಂಕಲ್ಪ ಉಭಯಗೂಡಿದ ವರ್ತಕದಲ್ಲಿ ಷಡ್ಗುಣ ಸಾರಸಂಬಂಧ ದುರ್ಭಾವತ್ರಯಗೂಡಿ ಜೀವಿಸುವ ಪ್ರಾಣಿಯು ಕಂಡಾಡುವ ಕಟ್ಟಳೆಯ ಸೋಗುಹೊತ್ತು ನಡೆದರೇನು, ಅದನು ನುಡಿದರೇನು? ಆ ನಡೆನುಡಿಯ ವಾಸನೆಯನರಿಯದಿರ್ಪ ಸದ್ಭಕ್ತಿಚರಿತೆಯ ಸುಖದೊಳಗೆ ಸದ್ಗುರು ಚನ್ನವೃಷಭೇಂದ್ರಲಿಂಗವು.