ಪಂಚಭೌತಿಕ ಧರ್ಮ ಅಂತರವೇದಿಯಾಗಿ
ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ವಂಚನೆ
ಉದಾಸೀನ ನಿರ್ದಯವೆಂಬಾರು ಅಂತರಂಗದ ಭವಿ,
ಬಹಿರಂಗದ ವೇದಿಯಾಗಿ ಮದಮುಖದಿಂದೆ ವರ್ತಿಸುವ ನರನು
ವೇಷಲಾಂಛನ ಹೊತ್ತು ನಡೆವಲ್ಲಿ ಪರಮಾಚಾರಪ್ರಿಯ
ಚನ್ನಬಸವಲಿಂಗವಲ್ಲದಿರ್ದನು ಸದಮಲಲಿಂಗದಲ್ಲಿ.
Art
Manuscript
Music
Courtesy:
Transliteration
Pan̄cabhautika dharma antaravēdiyāgi
anr̥ta asthiravākya paṅktibhēda van̄cane
udāsīna nirdayavembāru antaraṅgada bhavi,
bahiraṅgada vēdiyāgi madamukhadinde vartisuva naranu
vēṣalān̄chana hottu naḍevalli paramācārapriya
cannabasavaliṅgavalladirdanu sadamalaliṅgadalli.
ಸ್ಥಲ -
ಆಚಾರಾಂಗಸ್ಥಲದ ವಚನಗಳು