Index   ವಚನ - 1185    Search  
 
ಪಂಚೇಂದ್ರಿಯ ಕರ್ಮವಳಿಯದೆ, ಕಾಯಕ ಗುಣನಾಲ್ಕರಲ್ಲಿ ಕಟ್ಟುಗೊಂಡು, ವಾಚಕದ ಗುಣಯುತನಾಗಿ, ಮಾನಸದ ಗುಣನಾಲ್ಕರ ಬದ್ಧವೆರೆದ ಅಶುದ್ಧನೊಂದಾಚಾರವ ಹೊತ್ತು ನಟಿಸಿದರೇನು, ಅವನಿಗದ ತೋರಿ ನಟಿಸುತ್ತಿರ್ದನನುದಿನ ಭಕ್ತನಂಗ ಸುಲಲಿತ ಸುಖದೊಳು ನಮ್ಮ ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರದಾಯಕಲಿಂಗವು.