ಶಿವನಂಗ ಶರಣನೆಂದು ಅರಿದು ಬಂದ ನಿಜನು ಮರವೆಯನರಿಯದೆ
ಬರಿಯ ಹಿರಿಯ ಹೆಮ್ಮೆಯನುತ್ತರಿಸುತ್ತ ಕಂಡಲ್ಲಿ ಸಾವಧಾನಸಂಬಂಧವಾಗಿ
ಸುಮುಖ ವಿನೋದಪರಿಣಾಮದೋರುತ್ತ
ಪರಿಪೂರ್ಣಪದದೊಳೊಪ್ಪುತಿರ್ದನು
ಶುದ್ಧಸಿದ್ಧಪ್ರಸಿದ್ಧ ಪ್ರಭುಲಿಂಗ ಭಕ್ತನು.
Art
Manuscript
Music
Courtesy:
Transliteration
Śivanaṅga śaraṇanendu aridu banda nijanu maraveyanariyade
bariya hiriya hem'meyanuttarisutta kaṇḍalli sāvadhānasambandhavāgi
sumukha vinōdapariṇāmadōrutta
paripūrṇapadadoḷopputirdanu
śud'dhasid'dhaprasid'dha prabhuliṅga bhaktanu.
ಸ್ಥಲ -
ಶಿವಾಂಗಸ್ಥಲದ ವಚನಗಳು