ಆಕಾಶತತ್ವದಿಂದುದುರಿ ಬಂದ ಬೀಜವು ಧರೆಯುದಕ
ಸಂಗದಲ್ಲಿ ಅಡಗಿರ್ದಡೇನು
ಅಂಕುರಿಸಿ ಆಕಾಶಕ್ಕೆ ತಲೆಯದೋರುವುದಲ್ಲದೆ,
ಭುವನದತ್ತ ತಲೆಯಿಡದು ನೋಡಾ.
ಘನಗಂಭೀರ ಶರಣನು ತಾನೊಂದು ಕಾರ್ಯಕ್ಕೆ ಹೇಗೆ ಹಿಡಿದು
ಮುಸುಕಿರ್ದಡೇನು,
ಕ್ರಿಯಾಭೋಗಿತ್ತ ಜ್ಞಾನಭೋಗತ್ತ ನಡುವೆ ಪರಿಪೂರ್ಣ ಭಕ್ತಿನಿರಂತರ.
ಇದು ಗೌರವಾಂಗದತಿಶಯದ ನಿಲವು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.