ಇಂದ್ರಿಯಂಗಳ ಗಮನಗೆಡದೆ
ಕರಣಂಗಳ ಸೂತಕ ಕಡೆಗಾಗದೆ
ಆತ್ಮನ ಕುರುಹು ಅಡಗದೆ ಬರಿದೆ
ಭ್ರಮೆಗೊಂಡು ಹಿರಿಯತನವ ಹೊತ್ತರಲ್ಲ!
ಮತ್ತೆ ಪೂರ್ವ ಮೊತ್ತದ ಬರಿವಿದ್ಯೆ
ಬಂಧನಕ್ಕೆರಗಿ ಸಂದಿನ ಕಿಚ್ಚಿನಲ್ಲಿ ಬೆಂದರಲ್ಲ!
ಒಂದುವನರಿಯದೆ ಹಿಂದಿನ
ಸರಮಾಲೆಯ ಸಂಕೋಲೆಯೊಳಗಾಗಿ
ಭೋಗವನರಿವರು ಕಾಣಾ ಪಂಚಾಕ್ಷರಮೂರ್ತಿಲಿಂಗವೆ.
Art
Manuscript
Music
Courtesy:
Transliteration
Indriyaṅgaḷa gamanageḍade
karaṇaṅgaḷa sūtaka kaḍegāgade
ātmana kuruhu aḍagade baride
bhramegoṇḍu hiriyatanava hottaralla!
Matte pūrva mottada barividye
bandhanakkeragi sandina kiccinalli bendaralla!
Onduvanariyade hindina
saramāleya saṅkōleyoḷagāgi
bhōgavanarivaru kāṇā pan̄cākṣaramūrtiliṅgave.
ಸ್ಥಲ -
ಶೇಷಾಂಗಸ್ಥಲದ ವಚನಗಳು