ಅಚ್ಚುಗವಿಲ್ಲದ ಅಚ್ಚುಗವಿದೇನಯ್ಯಾ?
ಕಣ್ಣ ಮುಂದೆ ಮೆಚ್ಚುವಿಲ್ಲದ ಮೆಚ್ಚು ಇದೇನಯ್ಯಾ ಹುಚ್ಚುಗೊಂಡಿತ್ತು!
ನಾನೆಂಬುದು ನಷ್ಟವಾಗಿ ನೀನೆಂಬುದು ನಿಂದುರಿದು,
ಬೆಳಗಹೊದ್ದು ಬೆಳಗನುಂಡು ಬೆಂಬಳಿಯ
ಸುಖವ ಮುಂಬಳಿಯೊಳಿಟ್ಟು
ಮುಂಬರಿವ ನಮ್ಮ ಚೆಲುವಾಂಗ
ಪ್ರಾಣಾತ್ಮಪ್ರಿಯ ಸಿದ್ಧಲಿಂಗ.
Art
Manuscript
Music
Courtesy:
Transliteration
Accugavillada accugavidēnayyā?
Kaṇṇa munde meccuvillada meccu idēnayyā huccugoṇḍittu!
Nānembudu naṣṭavāgi nīnembudu ninduridu,
beḷagahoddu beḷaganuṇḍu bembaḷiya
sukhava mumbaḷiyoḷiṭṭu
mumbariva nam'ma celuvāṅga
prāṇātmapriya sid'dhaliṅga.
ಸ್ಥಲ -
ಶೇಷಾಂಗಸ್ಥಲದ ವಚನಗಳು