Index   ವಚನ - 1233    Search  
 
ಅಯ್ಯಾ, ಭಕ್ತಲಿಂಗಸಮರಸಾಂಗವೆಂತಿರ್ಪುದು ನೋಡಾ! ಜಲ-ಜಲಗಲ್ಲಿನ ಕೂಟದಂತೆ, ಮುತ್ತುಂಡ ನೀರಿನಂತೆ, ಜ್ಯೋತಿಯೊಳರತ ತೈಲದಂತೆ ಇರ್ದುದು ಮಹದಂಗದ ನಿಲವು, ನಿಶ್ಚಯವದು ಕಾಣಾ ಮಹಾಘನ ಚನ್ನವೃಷಭೇಂದ್ರಲಿಂಗ.