Index   ವಚನ - 1234    Search  
 
ಮಾಡುವುದು ಭಕ್ತಿಯ ತನುವಂಚನೆಯೊಳಡಗಿ, ನೀಡುವುದು ಮನವ ಸಂಶಯದೊಳ್ನಿಂದು, ಕೂಡುವುದು ಲಿಂಗವ ಕಾಯವಂತನಾಗಿ, ಇದು ಭಾರ ಭಾರ ಬಲುಭಾರ ಕಂಡುಂಡು ಕಾಂಬುವರು ಭವಲತೆಯ ಬುಡವ ಚನ್ನವೃಷಭೇಂದ್ರಲಿಂಗವನರಿಯದೆ.