ಸದಾತ್ಮರುಗಳಲ್ಲಿ ಅಯ್ಯಾ, ಬಂದವರುಂಟು
ಸಂದವರುಂಟು ಯೋನಿಸಂಸಾರ ಮರಣದಲ್ಲಿ.
ನಾ ಕಾಣೆನಯ್ಯಾ ಬಂದವರ,
ನಾ ನೋಡೆನಯ್ಯಾ ನಿಂದವರ,
ನಾನರಿಯೆನಯ್ಯಾ ಸಂದವರ ನಿಮಗಾಗಿ
ಚನ್ನ ತ್ರಿವರ್ಣಲಿಂಗವೆ ನಿಮ್ಮವಿಡಿದವರನಲ್ಲದೆ.
Art
Manuscript
Music
Courtesy:
Transliteration
Sadātmarugaḷalli ayyā, bandavaruṇṭu
sandavaruṇṭu yōnisansāra maraṇadalli.
Nā kāṇenayyā bandavara,
nā nōḍenayyā nindavara,
nānariyenayyā sandavara nimagāgi
canna trivarṇaliṅgave nim'maviḍidavaranallade.