Index   ವಚನ - 1238    Search  
 
ಭಂಗಭರಿತರ ಮಾತನೇನೆಂಬೆ ನೋಡಾ. ಭವಸಂಪ್ರೀತರ ಮಾತನೇನೆಂಬೆ ನೋಡಾ. ಯೋನಿಸೂತಕರ ಮಾತನೇನೆಂಬೆ ನೋಡಾ. ಪ್ರಮಥರ ನಡೆನುಡಿಯೈಕ್ಯ ಪ್ರಮಥರಿಗೆ ಸರಿ ನಮಗಾಗಬಲ್ಲುದೇ ಹೇಳಾ ಎಂಬುವರು. ತನುವೊಂದು ಜ್ಞಾನವೊಂದು ವೈರಾಗ್ಯವೊಂದು ಭಕ್ತಿಯೊಂದು ಕಾರುಣ್ಯವೊಂದು ಆಚಾರವೊಂದು ಅನುಭಾವವೊಂದು ಸಮರಸವೊಂದು ಮತ್ತೆ ಇನ್ನೊಂದು ಬೇರುಂಟೆ ಶಿವಾಂಶಿಕರಿಗೆ ಹೇಳಾ? ಇಂತಾ ಜಡಮೂಢಪ್ರಾಣಿಗಳ ಮಾತಿಂಗೆ ಮಾತ ನೀಡಲಾಗದು ಕಾಣಾ ಪರಿಣಾಮ ಭರಿತಾಂಗರು ನಿಜಾಂತಃಪ್ರಿಯ ಚನ್ನಬಸವಲಿಂಗಾ.