Index   ವಚನ - 9    Search  
 
ಅಶ್ವತ್ಥವೃಕ್ಷದ ಪರ್ಣದ ಅಗ್ರದ ಬಿಂದುವಿನಂತೆ ಅಲ್ಪಸುಖಕ್ಕೆ ಮಚ್ಚಿ ಕುಕ್ಕರ ಆಸ್ತಿಯ ಕಚ್ಚಿ ತನ್ನಯ ಶೋಣಿತವ ಚಪ್ಪಿರಿವಂತೆ. ಉಚ್ಛೆಯ ಬಚ್ಚಲ ಕೊಚ್ಚೆಯ ಹಡಿಕೆಯ ಮಚ್ಚಿಕೊಂಡಿಪ್ಪ ಕಕ್ಕುಲತೆಯಣ್ಣಗಳು ಕೇಳಿರೋ, ಅದು ಮರ್ತ್ಯದ ಹುದುಗು, ಚಿತ್ತದ ವಿರೋಧ, ಭುಕ್ತಿಯ ವಕ್ರ, ತಮದ ಪುಂಜ, ಕೌರುಕನಂಗ ಸೌಭೇದಿನ ಬೀಡು, ಮಲದ ಭಾಂಡ. ಭಾವದ ಭ್ರಮೆಯನರಿ, ಉರಿ ಫಳಕದಂತೆ ನೆರೆ ನಂಬಿರು ಆತುರವೈರಿ ಮಾರೇಶ್ವರಾ.