Index   ವಚನ - 29    Search  
 
ಕಾಯ ಕಲ್ಪಿತಕ್ಕೊಳಗು, ಜೀವ ಭವಕ್ಕೊಳಗು. ಈ ಉಭಯದ ಠಾವನರಿಯದೆ ಧಾವತಿಗೊಂಬರೆಲ್ಲರು. ಕಾವಲಾದರು ಕಾಮನ ಕರ್ಮವಕ್ಕೆ. ಈ ಭಾವವನರಿತು ತೊಲಗು ಸಾರಿದೆ, ಸಾರಧಿಯ ಪತಿಯೊಡೆಯ ಆತುರವೈರಿ ಮಾರೇಶ್ವರಾ.