ಗುರುವಿನಲ್ಲಿ ಗುಣವಿಲ್ಲದಿರ್ದಡೆ ಪೂಜ್ಯನಾಗಿ
ಪೊಡವಡಿಸಿಕೊಳಲೇಕೆ?
ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ತ್ರಿಸಂಧ್ಯಾಕಾಲದಲ್ಲಿ
ಪೂಜಿಸಿಕೊಳಲೇಕೆ?
ಜಂಗಮದಲ್ಲಿ ಜಾತಿಯಿಲ್ಲದಿರ್ದಡೆ
ಹಿರಿದು ಕಿರಿದೆಂದು ಹೋರಲೇಕೆ?
ಇದನೇನ ಹೇಳುವೆ?
ಗುರು ಭವಕ್ಕೊಳಗಾದ, ಲಿಂಗ ಲಕ್ಷಣಕ್ಕೊಳಗಾಯಿತ್ತು.
ಜಂಗಮ ಜಾತಿಗೊಳಗಾದ!
ಇವನೆಲ್ಲವ ಹೇಳಿ ಹೇಳಿ:
ಎನಗಿದು ಒಳ್ಳಿತ್ತೊ ಹೊಲ್ಲವೊ? ಗೆಲ್ಲತನಬೇಡ,
ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Guruvinalli guṇavilladirdaḍe pūjyanāgi
poḍavaḍisikoḷalēke?
Liṅgadalli lakṣaṇavilladirdaḍe trisandhyākāladalli
pūjisikoḷalēke?
Jaṅgamadalli jātiyilladirdaḍe
hiridu kiridendu hōralēke?
Idanēna hēḷuve?
Guru bhavakkoḷagāda, liṅga lakṣaṇakkoḷagāyittu.
Jaṅgama jātigoḷagāda!
Ivanellava hēḷi hēḷi:
Enagidu oḷḷitto hollavo? Gellatanabēḍa,
āturavairi mārēśvarā.