Index   ವಚನ - 44    Search  
 
ಚೇತನದಿಂದ ಬಿಂದು, ಆ ಬಿಂದುವಿನಿಂದ ಸಾಕಾರ, ಆ ಸಾಕಾರದಿಂದ ವೈಭವ, ಆ ವೈಭವದಿಂದ ಆಢ್ಯ. ಇಂತಿವೆಲ್ಲವೂ ಸಂಚಾರದ ಸಂದೇಹ. ಇದರಲ್ಲಿ ಕಂಚು ಮಿಂಚಾಗದೆ ಮುಂಚಬೇಕು ಆತುರವೈರಿ ಮಾರೇಶ್ವರಾ.