Index   ವಚನ - 48    Search  
 
ತಾ ಹೊಂದುವಾಗ ಕೈದು ಬಾಯೆಂದು ಕರೆದುದುಂಟೆ? ತಡಿಯಲ್ಲಿದ್ದು ಮಡುವಿನಲ್ಲಿ ಬೀಳುವಾಗ ಆ ಮಡು ಒಡಗೂಡುವ ಬಾಯೆಂದು ಕರೆಯಿತ್ತೆ? ತಮವಡಸಿದ ನಿಳಯಕ್ಕೆ ಕರೆಯಿತ್ತೆ ಜ್ಯೋತಿಯ? ನೀ ಬಂದ ಮಣಿಹಕ್ಕೆ ಎನ್ನ ಇರಲೀಸೆಯೆಂದು ಅಸ್ಮಿಕದಲ್ಲಿ ಆತುರವೈರಿ ಮಾರೇಶ್ವರಾ