Index   ವಚನ - 54    Search  
 
ದಂತಶೂಕ ಶಿಲೆಯಿದಿರಲ್ಲಿ ಬಂದು ನಿಂದಿರಲಾಗಿ, ತನ್ನ ಆಕಾರ ಪ್ರತಿಬಿಂಬಿಸಲಿಕ್ಕೆ ತಿಳಿಯಲರಿಯದೆ ಹೋರಿ ನೊಂದಿತ್ತಲ್ಲಾ! ನಾನೆಂಬುದನರಿಯದೆ ಅರಿದೆನೆಂಬವರೆಲ್ಲಾ ಅಹಂಕಾರ ಅಹಂಮಮತೆಗೆ ರಾಗಿಗಳಾದಿರಣ್ಣಾ ತನ್ನಲ್ಲಿ ತೋರುವ ದ್ವೇಷ ತನಗೆ ಇದಿರಾದುದ ತಾನರಿಯದೆ, ಇದಿರಿಗೆ ಹೇಳಿಹೆನೆಂದು ಹುದುಗಿಗೆ ಹೋರಲೇಕೆ? ಆತುರವೈರಿ ಮಾರೇಶ್ವರಾ.