Index   ವಚನ - 99    Search  
 
ಹೊಳೆಯಲ್ಲಿ ನಿಂದಿರ್ದು ಹಾದಿಯ ಕೇಳಿದಡೆ, ತಡಿಮಡುವ ಹೇಳಿದಡೆ ಅದು ಕೆಡುಗುಡಿತನವೆ? ಎನ್ನ ಬಿಡುವರು ಬಿಡಲಿ, ಇದ ನಡಸಿಯಲ್ಲದೆ ಬಿಡೆ, ಬಡ ಮತವಲ್ಲ. ಎನ್ನ ಒಡಗೂಡಿಕೊ, ಆತುರವೈರಿ ಮಾರೇಶ್ವರಾ.