Index   ವಚನ - 98    Search  
 
ಹೇಳಿಸಿಕೊಂಡು ಕೇಳಿ ಅರಿದೆಹೆನೆಂದಡೆ ಗಣಿತದ ಲೆಕ್ಕವಲ್ಲ. ಎನ್ನನರಿತು ನಿನ್ನನರಿವಡೆ ನಾ ಪರಂಜ್ಯೋತಿಯಲ್ಲ, ರುಜೆಯಡಸಿದವನ ದೇಹ, ಅಂಧಕನ ನೋಟ, ಪಂಗುಳನ ಪಯಣ, ಮತಿಹೀನನ ಗತಿಗೆಟ್ಟವನ ಮೋಕ್ಷ ಇಂತಿವು ಹುಸಿಯಾದ ತೆರ ನನಗೊ ನಿನಗೊ, ಆತುರವೈರಿ ಮಾರೇಶ್ವರಾ.