Index   ವಚನ - 5    Search  
 
ಆದಿಯನರಿದರು ಮಧ್ಯವನರಿಯರು ಮಧ್ಯವನರಿದರು ಅವಸಾನವನರಿಯರು. ಅವಸಾನವನರಿದರು ಆದಿಯನರಿಯರು. ಇಂತಿವರೊಳಗೊಂದನರಿದರು ಒಂದನರಿಯದರೊಂದಜ್ಞಾನಿಗಳಾಗಿ ಸಂದೇಹಕ್ಕೊಳಗಾದ ಮಂದಮತಿಗಳ ನಾನೆಂತು ನಿಮ್ಮ ಶರಣರಿಗೆಣೆಯೆಂಬೆ, ಪರಮಗುರುವೆ ನಂಜುಂಡಶಿವಾ?