ಕಂಡೆನವಿರಳನ ದೃಕ್ಕಿನಲ್ಲಿ, ಕಂಡೆನಪಾರನ ತ್ವಕ್ಕಿನಲ್ಲಿ,
ಕಂಡೆನುಪಮಾತೀತನ ಶ್ರೋತ್ರದಲ್ಲಿ,
ಕಂಡೆ ವಾಙ್ಮನಕ್ಕಗೋಚರನ ಘ್ರಾಣದಲ್ಲಿ,
ಕಂಡೆನನಘನತರ್ಕ್ಯನ ಜಿಹ್ವೆಯಲ್ಲಿ,
ಕಂಡೆನೇಕಯೇವನದ್ವಿತೀಯನ ಹೃತ್ಕಮಲದಲ್ಲಿ,
ನಮ್ಮ ಪರಮಗುರು ನಂಜುಂಡಶಿವನ.
Art
Manuscript
Music
Courtesy:
Transliteration
Kaṇḍenaviraḷana dr̥kkinalli, kaṇḍenapārana tvakkinalli,
kaṇḍenupamātītana śrōtradalli,
kaṇḍe vāṅmanakkagōcarana ghrāṇadalli,
kaṇḍenanaghanatarkyana jihveyalli,
kaṇḍenēkayēvanadvitīyana hr̥tkamaladalli,
nam'ma paramaguru nan̄juṇḍaśivana.