Index   ವಚನ - 9    Search  
 
[ಕರ]ಣೇಂದ್ರಿಯದಿಚ್ಛೆಯಂ ಪರಿದು, ಕಂಥೆ ಕಟ್ಟಿಗೆ ಜಡೆ ಕರ್ಪರ ಕಮಂಡಲು ಕಾಮಾಕ್ಷಿ ಭಸ್ಮಾಧಾರವನಳವಡಿಸಿಕೊಂಡು ಜಂಗಮವೆಂದೆನಿಸಿದ ಬಳಿಕ ಪಸಿವಡಗಿಸಿ, ಒಡಲ ಗಿಡಗರವ ತುಂಬಿದಡದು ಜಗದ ಸುಳುಹೆಂದೆ ಕಾಣಾ, ಪರಮಗುರುವೆ ನಂಜುಂಡಶಿವಾ.