Index   ವಚನ - 8    Search  
 
ಕಂಡೆನವಿರಳನ ದೃಕ್ಕಿನಲ್ಲಿ, ಕಂಡೆನಪಾರನ ತ್ವಕ್ಕಿನಲ್ಲಿ, ಕಂಡೆನುಪಮಾತೀತನ ಶ್ರೋತ್ರದಲ್ಲಿ, ಕಂಡೆ ವಾಙ್ಮನಕ್ಕಗೋಚರನ ಘ್ರಾಣದಲ್ಲಿ, ಕಂಡೆನನಘನತರ್ಕ್ಯನ ಜಿಹ್ವೆಯಲ್ಲಿ, ಕಂಡೆನೇಕಯೇವನದ್ವಿತೀಯನ ಹೃತ್ಕಮಲದಲ್ಲಿ, ನಮ್ಮ ಪರಮಗುರು ನಂಜುಂಡಶಿವನ.