ಗುರುಲಿಂಗಜಂಗಮ ತ್ರಿವಿಧಪ್ರಸಾದವ
ಕೊಂಡೆವೆಂದುಲಿವ ಅಜ್ಞಾನಿಗಳು ನೀವು ಕೇಳಿರೆ,
ಗುರುಪ್ರಸಾದವ ಕೊಂಡಲ್ಲಿ ಮಲತ್ರಯದೋಷವಳಿಯಬೇಕು.
ಲಿಂಗಪ್ರಸಾದವ ಕೊಂಡಲ್ಲಿ ಇಂದ್ರಿಯ ವಿಷಯಸೂತಕವಳಿಯಬೇಕು.
ಜಂಗಮಪ್ರಸಾದವ ಕೊಂಡಲ್ಲಿ ಸರ್ವಸಂಕಲ್ಪ ಸಂಶಯವಳಿಯಬೇಕು.
ಇಂತೀ ತ್ರಿದೋಷವಳಿಯದೆ ಆದ್ಯರ ವಚನವ ಕಲಿತು,
ಮನಬಂದಂತೆ ಉಲಿವುತಿಪ್ಪ ದುಶ್ಯೀಲರನೊಲ್ಲ,
ನಮ್ಮ ಪರಮಗುರು ನಂಜುಂಡಶಿವನು.
Art
Manuscript
Music
Courtesy:
Transliteration
Guruliṅgajaṅgama trividhaprasādava
koṇḍevenduliva ajñānigaḷu nīvu kēḷire,
guruprasādava koṇḍalli malatrayadōṣavaḷiyabēku.
Liṅgaprasādava koṇḍalli indriya viṣayasūtakavaḷiyabēku.
Jaṅgamaprasādava koṇḍalli sarvasaṅkalpa sanśayavaḷiyabēku.
Intī tridōṣavaḷiyade ādyara vacanava kalitu,
manabandante ulivutippa duśyīlaranolla,
nam'ma paramaguru nan̄juṇḍaśivanu.