Index   ವಚನ - 12    Search  
 
ಗುರುಲಿಂಗಭಕ್ತನಾದರೆ ಪಾಶತ್ರಯ ವಿರಹಿತನಾಗಿರಬೇಕು. ಗುರುಲಿಂಗನಿಷ್ಠನಾದರೆ ಅನ್ಯಭಜನೆಯಿಲ್ಲದಿರಬೇಕು. ಗುರುಲಿಂಗಪ್ರಸಾದಿಯಾದರೆ ಅನ್ಯರಲ್ಲಿ ಕೈಯಾನದಿರಬೇಕು. ಗುರುಲಿಂಗಪ್ರಾಣಿಯಾದರೆ ಅರ್ಪಿಸಿದಲ್ಲದ ಕೊಳ್ಳದಿರಬೇಕು. ಗುರುಲಿಂಗಸಮರಸನಾದರೆ ಅನ್ಯರಿಗೆರಗದಿರಬೇಕು. ಗುರುಲಿಂಗಶರಣನಾದರೆ ಇಹಪರವೆಂಬ ಇದ್ದೆಸೆಗಡಬೇಕು. ಇಂತು ಷಟ್ ಸ್ಥಲವಿಡಿದಾಚರಿಸಿ ಗುರುಲಿಂಗದಲ್ಲಿ ಎರಡಳಿದುಳಿದ ನಿಜಜ್ಞಾನಿ ತಾನೆ. ನಮ್ಮ ಪರಮಗುರು ನಂಜುಂಡಶಿವನು.