Index   ವಚನ - 5    Search  
 
ಅಂದಾದಿಬಿಂದುವಿನೊಳೊಂದಿದ ಹುಟ್ಟು, ಆ ಹುಟ್ಟನೆ ಹಿಡಿದು ಅಂದ ಚೆಂದದಲ್ಲಿ ತೊಳಲಿ ಆಡುತ್ತೈದಾರೆ ಜಗವೆಲ್ಲಾ! ಅಂದಗೆಟ್ಟವರೆಲ್ಲಾ ಬಂದೇರಿ ಹರುಗೋಲ, ಒಂದೆ ಹುಟ್ಟಿನಲ್ಲಿಳುಹುವೆನೆಂದಾತನಂಬಿಗರ ಚೌಡಯ್ಯ.